ಪೊಲೀಸ್ ತರಬೇತಿ ಮಹಾವಿದ್ಯಾಲಯ ಕಲಬುರಗಿ

ಕರ್ನಾಟಕ ರಾಜ್ಯ ಪೊಲೀಸ್

Back
ಒಳಾಂಗಣ ಸೌಲಭ್ಯಗಳು

               

 

ಗ್ರಂಥಾಲಯ

ಪಿಟಿಸಿಯು ವಿಶಾಲವಾದ ಗ್ರಂಥಾಲಯವನ್ನು ಹೊಂದಿದ್ದು ಒಮ್ಮೆಗೆ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅಧ್ಯಾಯನದ ಅವಕಾಶವನ್ನು ಕಲ್ಪಿಸುತ್ತದೆ. ಇದು ಪ್ರಶಿಕ್ಷಣಾರ್ಥಿಗಳ ಮಾಹಿತಿ ಅಗತ್ಯಗಳನ್ನು ಪೂರೈಸುವ ದೃಷ್ಟಿಯೊಂದಿಗೆ ತನ್ನ ಕಾರ್ಯವನ್ನು ಪ್ರಾರಂಭಿಸಿದ್ದು ಮುಖ್ಯವಾಗಿ ಕಾನೂನು ಸಂಬಂಧಿತ ವಿಷಯಗಳ ಪುಸ್ತಕಗಳನ್ನು ಹೊಂದಿದೆ.

ಗ್ರಂಥಾಲಯವು ಪಠ್ಯ ಪುಸ್ತಕಗಳು, ಆಕರ ಪುಸ್ತಕಗಳು, ಗ್ರಂಥಗಳು, ವಿವಿಧ ಪ್ರಕಟಣೆಗಳು, ಸಾಹಿತ್ಯ ಮತ್ತು ನಿಘಂಟುಗಳನ್ನೊಳಗೊಂಡಂತೆ 5610 ಪುಸ್ತಕಗಳ ಸಂಗ್ರಹವನ್ನು ಹೊಂದಿದೆ.

        

 

 

ಗಣಕಯಂತ್ರ ಪ್ರಯೋಗಾಲಯ

ಪಿಟಿಸಿಯು ಗಣಕಯಂತ್ರ ಪ್ರಯೋಗಾಲಯ ಸೌಲಭ್ಯದೊಂದಿಗೆ ಸುಸಜ್ಜಿತವಾಗಿದ್ದು ಹೆಚ್ಚಿನ ವೇಗದ LAN ನೆಟ್‌ವರ್ಕ್ ಮೂಲಕ ಸಂಪರ್ಕ ಹೊಂದಿದೆ. ಈ ಸೌಲಭ್ಯವು ಪಠ್ಯಕ್ರಮದ ಅವಿಭಾಜ್ಯ ಅಂಗವಾಗಿದ್ದು ಆಧುನಿಕ ಡಿಜಿಟಲ್  ಸವಾಲುಗಳನ್ನು ಎದುರಿಸಲು  ಪ್ರಶಿಕ್ಷಣಾರ್ಥಿಗಳು ಈ ಸೌಲಭ್ಯವನ್ನು ಬಳಸಬಹುದಾಗಿದೆ.

ಕಂಪ್ಯೂಟರ್ ಲ್ಯಾಬ್ LAN ಸಂಪರ್ಕದೊಂದಿಗೆ 50 ಕಂಪ್ಯೂಟರ್‌ಗಳನ್ನು ಹೊಂದಿದ್ದು ಈ ಕಂಪ್ಯೂಟಿಂಗ್ ಸೌಲಭ್ಯವನ್ನು ಮೂಲ ಕಂಪ್ಯೂಟರ್ ಶಿಕ್ಷಣ, ಪೊಲೀಸ್ ಐಟಿ, ಸೈಬರ್ ಕ್ರೈಂ ಮತ್ತು ಇತರ ಪಠ್ಯಕ್ರಮ ಚಟುವಟಿಕೆಗಳಿಗೆ ಬಳಸಬಹುದಾಗಿದೆ.

 

 

 

 

 

ಸ್ಮಾರ್ಟ್ ತರಗತಿಗಳು

ಪಿಟಿಸಿಯು ಸ್ಮಾರ್ಟ್ ತರಗತಿಗಳೊಂದಿಗೆ ಸುಸಜ್ಜಿತಗೊಂಡಿದ್ದು, ಸ್ಮಾರ್ಟ್ ತರಗತಿಗಳು ಕಂಪ್ಯೂಟರ್ ಸಹಾಯದಿಂದ ಕಲಿಕೆ ಮತ್ತು ಬೋಧನೆಯನ್ನು ಉತ್ತಮಗೊಳಿಸಿವೆ. ಪ್ರಶಿಕ್ಷಣಾರ್ಥಿಗಳಿಗೆ ವಿಷಯ ಮತ್ತು ಮಾಹಿತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಭೋದಿಸಲು  ಸ್ಮಾರ್ಟ್ ತರಗತಿಗಳು ಭೋದಕರಿಗೆ ಸಹಾಯ ಮಾಡುತ್ತವೆ. ಇದು ಪ್ರಶಿಕ್ಷಣಾರ್ಥಿ-ಭೋದಕರ ನಡುವೆ ನೇರ ಸಂವಹನಾತ್ಮಕ ಕಲಿಕೆಯ ಅವಧಿಗಳನ್ನು ಸೃಷ್ಟಿಸಿದೆ. ಡಿಜಿಟಲೈಸ್ಡ್ ತರಗತಿಗಳು ಪ್ರಶಿಕ್ಷಣಾರ್ಥಿಗಳಿಗೆ ಉತ್ತಮವಾಗಿ ವಿನ್ಯಾಸಗೊಳಿಸಿದ ಮಾಡ್ಯೂಲ್‌ಗಳ ಮೂಲಕ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ, ಇದು ಸ್ಥಿರ ಚಿತ್ರ ಮತ್ತು ವಿಡಿಯೋಗಳ ಸಹಾಯದಿಂದ ವಿಷಯಗಳನ್ನು ಉತ್ತಮವಾಗಿ ದೃಶ್ಯೀಕರಿಸಲು ಅನುವು ಮಾಡಿಕೊಡುತ್ತದೆ.

ಪಿಟಿಸಿಯು 10 ಸ್ಮಾರ್ಟ್ ತರಗತಿಗಳನ್ನು ಹೊಂದಿದ್ದು ತರಗತಿ ಕೊಠಡಿಗಳಿಗೆ ಕರ್ನಾಟಕದ ನದಿಗಳ ಹೆಸರನ್ನು ಇಡಲಾಗಿದೆ. ಪ್ರತಿ ತರಗತಿಗಳು ಒಮ್ಮೆಗೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಲಿಕಾ ಅವಕಾಶ ಕಲ್ಪಿಸುತ್ತದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಈ ತರಗತಿಗಳು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಅನುಕೂಲಕರವಾಗಿದೆ.

 

 

 

ಸಭಾಂಗಣ

ಪಿಟಿಸಿಯ ಮುಖ್ಯ ಸಭಾಂಗಣವು ಏಕಕಾಲದಲ್ಲಿ 500 ಕ್ಕೂ ಹೆಚ್ಚು ಜನರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು ಇದು ಯಾವುದೇ ಕಾರ್ಯಕ್ರಮ ಆಯೋಜನೆಯ ಪ್ರಮುಖ ಅಂಶವಾಗಿದೆ. ಇದನ್ನು ಸಾಂಸ್ಕೃತಿಕ ಕಾರ್ಯಕ್ರಮಗಳು, ಸೆಮಿನಾರ್‌ಗಳು, ವಾರಾಂತ್ಯದ ಚಲನಚಿತ್ರಗಳು ಮತ್ತು ಇತರ ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳಿಗೆ ಬಳಸಲ್ಪಡುತ್ತದೆ.

        

                                                           

        

                                                           

 

×
ABOUT DULT ORGANISATIONAL STRUCTURE PROJECTS