ಪೊಲೀಸ್ ತರಬೇತಿ ಮಹಾವಿದ್ಯಾಲಯ ಕಲಬುರಗಿ

ಕರ್ನಾಟಕ ರಾಜ್ಯ ಪೊಲೀಸ್

Back
ಹೊರಾಂಗಣ ಸೌಲಭ್ಯಗಳು

 

ಕವಾಯತು ಮೈದಾನ

ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಎರಡು ಕವಾಯತು ಮೈದಾನಗಳಿದ್ದು ಇದರಲ್ಲಿ ಮೊದಲನೆಯದು PSI ಕವಾಯತು ಮೈದಾನ. ಇದನ್ನು 2003 ರಲ್ಲಿ ಸ್ಥಾಪಿಸಲಾಗಿದೆ. ಇದರ ಒಟ್ಟು ಸುತ್ತುಳತೆಯು 400 ಮೀಟರ್ ಇದ್ದು  ಮೈದಾನದಲ್ಲಿ 7 ರಿಂದ 8 ತುಕಡಿಗಳು ಕವಾಯತು ಮಾಡುವಷ್ಟು ಸ್ಥಳಾವಕಾಶವಿದೆ .

ಎರಡನೇಯದಾದ ನೇತಾಜಿ ಕವಾಯತು  ಮೈದಾನವು 2008 ರಲ್ಲಿ ಸ್ಥಾಪನೆಯಾಗಿದ್ದು, 750 ಮೀಟರ್ ಸುತ್ತಳತೆಯನ್ನು ಹೊಂದಿದೆ. ಮೈದಾನದಲ್ಲಿ 15 ರಿಂದ 16 ತುಕಡಿಗಳು ಕವಾಯತು ಮಾಡುವಷ್ಟು ಸ್ಥಳಾವಕಾಶವನ್ನು ಹೊಂದಿದೆ. ಇದರ ಜೊತೆಗೆ ಕುಡಿಯುವ ನೀರುಶೌಚಾಲಯವಿಶ್ರಾಂತಿ ಕೊಠಡಿಗಳ ವ್ಯವಸ್ಥೆಯನ್ನು ಹೊಂದಿದೆ, ಜೊತೆಜೊತೆಗೆ ಮೈದಾನದ ಸುತ್ತಲು ಮನೋಹರ ಕೈತೋಟಹಸಿರು ಸೀರೆ ತೊಟ್ಟ ಪ್ರಕೃತಿಯಿದ್ದು ಪ್ರಶಿಕ್ಷಣಾರ್ಥಿಗಳ ಮನಸ್ಸಿಗೆ ಮುದ ನೀಡುತ್ತದೆ. ಇದರ ಜೊತೆಗೆ ಶಾರೀರಿಕ ಮತ್ತು ದೈಹಿಕ ವ್ಯಾಯಾಮಕ್ಕೆ ಬೇಕಾದ ಎಲ್ಲಾ ರೀತಿಯ ಉಪಕರಣಗಳನ್ನು ಹೊಂದಿರುತ್ತದೆ.

 

1. PSI ಕವಾಯತು ಮೈದಾನ

 

 

2. ನೇತಾಜಿ ಕವಾಯತು  ಮೈದಾನ

 

 

ಜಿಮ್

ಪಿಟಿಸಿಯ ಜಿಮ್ ಪ್ರಶಿಕ್ಷಣಾರ್ಥಿಗಳಿಗೆ ಅವಶ್ಯವಿರುವ ಅತ್ಯುತ್ತಮ ಉಪಕರಣಗಳೊಂದಿಗೆ ಸುಸಜ್ಜಿತಗೊಂಡಿದ್ದು, ಜಿಮ್ ಶಕ್ತಿಯನ್ನು ವೃದ್ಧಿಸಲು, ಸಾಮಾನ್ಯ ಫಿಟ್ನೆಸ್ ಅನ್ನು ಸುಧಾರಿಸಲು, ನಿರ್ದಿಷ್ಟ ಕ್ರೀಡೆಗೆ ತಾಲಿಮುಗೊಳಿಸಲು ಉತ್ತಮವಾಗಿದೆ. ಜಿಮ್ ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೆ  ತೆರೆದಿರುತ್ತದೆ.

 

ಈಜುಕೊಳ

ಈಜುಕೊಳವು ಪ್ರತಿ ಪ್ರಶಿಕ್ಷಣಾರ್ಥಿ ತಮ್ಮ ತರಬೇತಿ ಅವಧಿಯಲ್ಲಿ ಈಜು ಕಲಿಯಲು ಅನುಕೂಲಕರವಾಗಿದೆ. ನಿಯಮಿತ ಶುಚಿಗೊಳಿಸುವ ಕಾರ್ಯವಿಧಾನಗಳನ್ನು ಕೈಗೊಳ್ಳುವ ಮೂಲಕ ಈಜುಕೊಳವನ್ನು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿರಿಸಲಾಗಿದೆ.

 

 

 

 

 

 

 

 

×
ABOUT DULT ORGANISATIONAL STRUCTURE PROJECTS