ಪೊಲೀಸ್ ತರಬೇತಿ ಮಹಾವಿದ್ಯಾಲಯ ಕಲಬುರಗಿ

ಕರ್ನಾಟಕ ರಾಜ್ಯ ಪೊಲೀಸ್

Back
ವಿಶೇಷ ಕಲಿಕೆ

ಸಿಮ್ಯುಲೇಟರ್‌ ಕೊಠಡಿ

 

ಸಿಮ್ಯುಲೇಟರ್ ನ ಉದ್ದೇಶವು ಪ್ರಶಿಕ್ಷಣಾರ್ಥಿಗಳನ್ನು ಯುದ್ಧಸಂಧರ್ಭಗಳಿಗೆ ಸಜ್ಜುಗೊಳಿಸುವುದಾಗಿದ್ದು, ಸಿಮ್ಯುಲೇಟರ್ ಸಂಪೂರ್ಣವಾಗಿ ಒಳಾಂಗಣದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಯುದ್ಧದ ಸಮಯದಲ್ಲಿ ಯೋಧನು ಎದುರಿಸಬಹುದಾದ ಎಲ್ಲಾ ಸನ್ನಿವೇಶಗಳನ್ನು ಒಳಗೊಂಡಿದ್ದು, ಯುದ್ಧದ ಸ್ಥಳಗಳು ಮತ್ತು ಯುದ್ಧಸಾಮಗ್ರಿಗಳನ್ನು ಹೋಲುವಂತ ದೃಶ್ಯಗಳೊಂದಿಗೆ ಪ್ರಶಿಕ್ಷಣಾರ್ಥಿಗಳ ಮನೋಬಲ ಹೆಚ್ಚಿಸುವುದು ಇದರ ಉದ್ದೇಶ. ಯುದ್ಧ ಸಾಮಗ್ರಿಗಳ ಸವಕಳಿಯನ್ನು ತಡೆಯುವುದರೊಂದಿಗೆ ಮಾನವ ಸಂಪನ್ಮೂಲಗಳ ಸಾಗಣೆಯ ವೆಚ್ಚ ಮತ್ತು ಸಮಯವನ್ನು ಉಳಿಸುವಲ್ಲಿ  ಸಿಮ್ಯುಲೇಟರ್ ಸಹಾಯಕವಾಗಿದೆ.

ಇದರೊಂದಿಗೆ, ಸಿಮ್ಯುಲೇಟರ್ ಗುಂಪು ತರಬೇತಿಗೆ ತನ್ನನ್ನು ತಾನು ಹೊಂದಿಸಿಕೊಳ್ಳುವ ಗುಣವನ್ನು ಹೊಂದಿದ್ದು, ಕಾಲಕ್ಕೆ ತಕ್ಕಂತೆ ನವೀಕರಣಗೊಳ್ಳುವುದರಿಂದ ಅತ್ಯುನ್ನತ ಶಸ್ತ್ರಾಸ್ತ್ರಗಳ ಮತ್ತು ಯುದ್ಧ ತಂತ್ರಗಳ ಬಗ್ಗೆ ತಿಳಿಯಲು ಅನುಕೂಲವಾಗುತ್ತಿದೆ.

ಪ್ರಶಿಕ್ಷಣಾರ್ಥಿಗಳು ಪರಿಪೂರ್ಣರಾಗಲು, ತರಬೇತಿಯನ್ನು ಮೇಲ್ವಿಚಾರಣೆ ಮಾಡುವ ಬೋಧಕರಿಗೆ ಮಾರ್ಗದರ್ಶನ ಮಾಡಲು ದತ್ತಾಂಶಗಳನ್ನು ಒದಗಿಸುತ್ತಿದ್ದು, ಈ ಸೌಲಭ್ಯವು ಬೋಧಕರಿಗೆ ಪ್ರಶಿಕ್ಷಣಾರ್ಥಿಗಳ ದೋಷಗಳನ್ನು ಗುರುತಿಸಲು ಮತ್ತು ಅವರನ್ನು ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತಿದೆ. ಇದರೊಂದಿಗೆ, ಪ್ರಶಿಕ್ಷಣಾರ್ಥಿಗಳ ಕಾರ್ಯಕ್ಷಮತೆಯ ವರದಿಗಳನ್ನು ದಾಖಲೆಗಳಾಗಿ ಸಂಗ್ರಹಿಸಲು ಮುದ್ರಣ ಸೌಲಭ್ಯವು ಉಪಯುಕ್ತವಾಗಿದೆ.

 

ಭಯೋತ್ಪಾದನ ನಿಗ್ರಹ ಪಡೆ ತರಬೇತಿ

ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೆ  CCT(CENTER FOR COUNTER TERRORISM) ವತಿಯಿಂದ ಭಯೋತ್ಪಾದನೆ ನಿಗ್ರಹ ಮತ್ತು ತಡೆಗೆ ಸಂಬಂಧಿಸಿದಂತೆ ಒಂದು ವಾರಗಳ ಕಾಲ ಕಠಿಣ ತರಬೇತಿಯನ್ನು ನೀಡಲಾಗುತ್ತದೆ. ಈ ಸಮಯದಲ್ಲಿ ನುರಿತ CCT ಸಿಬ್ಬಂದಿಗಳು (MAJORS & COMMANDOS) ಮಹಾವಿದ್ಯಾಲಯದ ಆವರಣದಲ್ಲಿ ಆಧುನಿಕ ಆಯುಧಗಳು, ಶಸ್ತ್ರಗಳು, ಯುಧ್ಧ ಕೌಶಲ್ಯಗಳು, ಸ್ವ ರಕ್ಷಣೆಗೆ ಸಂಬಂಧಿಸಿದಂತಹ ಸಾಮಾಗ್ರಿಗಳು ಮುಂತಾದ ಕಲೆಗಳ ಬಗ್ಗೆ ಪ್ರಾಯೋಗಿಕ ಭಯೋತ್ಪಾದನ ನಿಗ್ರಹ ತರಬೇತಿಯನ್ನು ನೀಡಲಾಗುತ್ತದೆ.

 

 

 

 

×
ABOUT DULT ORGANISATIONAL STRUCTURE PROJECTS