ಪೊಲೀಸ್ ತರಬೇತಿ ಮಹಾವಿದ್ಯಾಲಯ ಕಲಬುರಗಿ

ಕರ್ನಾಟಕ ರಾಜ್ಯ ಪೊಲೀಸ್

Back
ಪ್ರಾಂಶುಪಾಲರ ಸಂದೇಶ

ಶ್ರೀ ಡೆಕ್ಕಾ ಕಿಶೋರ ಬಾಬು ಐ.ಪಿ.ಎಸ್ 

ಎಸ್‌ ಪಿ ಮತ್ತು ಪ್ರಾಂಶುಪಾಲರು

ಪೊಲೀಸ್‌ ತರಬೇತಿ ಮಹಾವಿದ್ಯಾಲಯ ಕಲಬುರಗಿ

 

ಪೊಲೀಸ್ ತರಬೇತಿ ಮಹಾವಿದ್ಯಾಲಯವು ದೇಶದ ಅತ್ಯುನ್ನತ ಪೊಲೀಸ್ ತರಬೇತಿ ಸಂಸ್ಥೆಗಳಲ್ಲಿ ಒಂದಾಗಿದ್ದು, ಕಳೆದ ೧೮ ವರ್ಷಗಳಿಂದ ಪೊಲೀಸ್ ಅಧಿಕಾರಿಗಳನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಬುನಾದಿ ತರಬೇತಿಗೆ ಆಗಮಿಸುವ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡುವ ಗುರುತರ ಜವಾಬ್ದಾರಿಯನ್ನು ಹೊತ್ತು ಶಿಸ್ತುಬದ್ಧ ಸೇವೆಗೆ ಪೊಲೀಸ್ ಅಧಿಕಾರಿಗಳನ್ನು ಈ ಸಮಾಜಕ್ಕೆ ನೀಡುವಲ್ಲಿ ಪೊಲೀಸ್ ತರಬೇತಿ ಮಹಾವಿದ್ಯಾಲಯವು ಮಹತ್ತರವಾದ ಪಾತ್ರವನ್ನು ವಹಿಸುತ್ತಾ ಬಂದಿದೆ.

ತರಬೇತಿ ಕಾಲೇಜಿನ ಪ್ರತಿಯೊಬ್ಬ ಅಧಿಕಾರಿ ಹಾಗು ಸಿಬ್ಬಂದಿಗಳು ಗಮನಾರ್ಹ ಕೊಡುಗೆ ನೀಡುತ್ತಿದ್ದು ರಾಜ್ಯದಲ್ಲಿ ಅತ್ಯುತ್ತಮ ಪೊಲೀಸ್ ಅಧಿಕಾರಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.


ಸಮವಸ್ತ್ರವನ್ನು ಧರಿಸುವ ಪ್ರತಿಯೊಬ್ಬರೂ ವೃತ್ತಿಪರತೆಯ ಮನೋಭಾವವನ್ನು ಬೆಳೆಸಲು ಶ್ರಮಿಸಬೇಕು ಮತ್ತು ನಮ್ರತೆ ಮತ್ತು ಸೇವೆಯ ಪ್ರಾಮಾಣಿಕ ಭಾವನೆಯನ್ನು ಉಳಿಸಿಕೊಂಡು ಸರಿಯಾದ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು.

 

×
ABOUT DULT ORGANISATIONAL STRUCTURE PROJECTS