ಪೊಲೀಸ್ ತರಬೇತಿ ಮಹಾವಿದ್ಯಾಲಯ ಕಲಬುರಗಿ

ಕರ್ನಾಟಕ ರಾಜ್ಯ ಪೊಲೀಸ್

Back
ಪೊಲೀಸ್ ತರಬೇತಿ ಮಹಾವಿದ್ಯಾಲಯ ನಾಗನಹಳ್ಳಿ ಕಲಬುರಗಿ ಪರಿಚಯ

  ppp

 

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಒಂದು ಶಿಸ್ತಿನ ಇಲಾಖೆಯಾಗಿದ್ದು ಪೋಲಿಸ್ ಇಲಾಖೆಯ ಪಿಎಸ್‍ಐ(ನಾ)/ಆರ್‍ಎಸ್‍ಐ/ಸ್ಪೆ.ಆರ್‍ಎಸ್‍ಐ/ಡಿಎಸ್‍ಐ(ಸಿಐಡಿ)/ಪಿಎಸ್‍ಐ(ನಿ)/ಪಿಎಸ್‍ಐ(ಎಪ್‍ಪಿಬಿ)/ಪಿಎಸ್‍ಐ(ಗು) ಹುದ್ದೆಗೆ ನೇಮಕಗೊಂಡು ಬುನಾದಿ ತರಬೇತಿಗೆ ಪ್ರತಿಷ್ಠಿತ ಪೊಲೀಸ್ ತರಬೇತಿ ಮಹಾವಿದ್ಯಾಲಯ ನಾಗನಹಳ್ಳಿ, ಕಲಬುರಗಿಗೆ ಆಗಮಿಸುತ್ತಿರುವ ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೆ ಪೊಲೀಸ್ ತರಬೇತಿ ಮಹಾವಿದ್ಯಾಲಯವು ಅಭಿನಂದನೆಗಳನ್ನು ಸಲ್ಲಿಸುವುದರ ಜೊತೆಗೆ ಹಾರ್ದಿಕವಾಗಿ ಸ್ವಾಗತವನ್ನು ಕೋರುತ್ತದೆ.

ಬುನಾದಿ ತರಬೇತಿಗೆ ಆಗಮಿಸುವ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡುವ ಗುರುತರ ಜವಾಬ್ದಾರಿಯನ್ನು ಹೊತ್ತು ಶಿಸ್ತುಬದ್ಧ ಸೇವೆಗೆ ಪೊಲೀಸ್ ಅಧಿಕಾರಿಗಳನ್ನು ಈ ಸಮಾಜಕ್ಕೆ ನೀಡುವಲ್ಲಿ ಪೊಲೀಸ್ ತರಬೇತಿ ಮಹಾವಿದ್ಯಾಲಯವು ಮಹತ್ತರವಾದ ಪಾತ್ರವನ್ನು ವಹಿಸುತ್ತಾ ಬಂದಿದೆ.

ಕಲ್ಯಾಣ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಒಂದಾದ ಸೂರ್ಯನಗರಿಯೆಂದೆ ಪ್ರಸಿದ್ಧಿ ಪಡೆದ ಕಲಬುರಗಿ ಜಿಲ್ಲೆಯಲ್ಲಿ, 2003 ರಲ್ಲಿ ಪೊಲೀಸ್ ತರಬೇತಿ ಮಹಾವಿದ್ಯಾಲಯವು ಪ್ರಾರಂಭವಾಗಿದ್ದು ಕಲಬುರಗಿ ನಗರದ ಹೊರವಲಯದ ರಿಂಗ್ ರೋಡಿಗೆ ಸಮೀಪದಲ್ಲಿರುವ ನಾಗನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡು ರೈಲ್ವೆ ನಿಲ್ದಾಣದಿಂದ 4 ಕಿಲೋ ಮೀಟರ್, ಕೇಂದ್ರ ಬಸ್ಸ್ ನಿಲ್ದಾಣದಿಂದ 5 ಕಿಲೋ ಮೀಟರ್, ಹಾಗೂ ವಿಮಾನ ನಿಲ್ದಾಣದಿಂದ 17 ಕಿಲೋ ಮೀಟರ್ ಅಂತರದಲ್ಲಿ ಇರುತ್ತದೆ. ಪೊಲೀಸ್ ತರಬೇತಿ ಮಹಾವಿದ್ಯಾಲಯಕ್ಕೆ ಆಗಮಿಸಲು ಆಟೊರಿಕ್ಷಾ/ಸಿಟಿಬಸ್ಸಗಳ ಅನುಕೂಲತೆ ಇರುತ್ತದೆ.

 

                        

 

ಪೊಲೀಸ್ ಮಹಾವಿದ್ಯಾಲಯವು ಸುಮಾರು 94 ಎಕರೆ ಜಮೀನಿನಲ್ಲಿ ಸವಿಸ್ತಾರವಾಗಿ ವಿಶಾಲವಾಗಿದ್ದು ತರಬೇತಿಗೆ ಬೇಕಾಗುವಂತಹ ಎಲ್ಲಾ ಅನುಕೂಲಗಳನ್ನು ಹೊಂದಿರುತ್ತದೆ. ಸುಸಜ್ಜಿತವಾದ ಆಡಳಿತ ಕಛೇರಿ, ಒಳಾಂಗಣ ತರಬೇತಿಗಾಗಿ ಉಪನ್ಯಾಸಕ ಕೊಠಡಿಗಳು, ಸುಸಜ್ಜಿತವಾದ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ವ್ಯಾಯಾಮ ಶಾಲೆ, ಈಜುಕೊಳ, ವಿಶಾಲವಾದ 2 ಕವಾಯತು ಮೈದಾನಗಳು ಹಾಗೂ ಉಪಹಾರಗೃಹಗಳು ಮತ್ತು ಪ್ರಶಿಕ್ಷಣಾರ್ಥಿಗಳಿಗೆ ವಸತಿಗೃಹಗಳನ್ನು ಒಳಗೊಂಡಿರುತ್ತದೆ.

ಒಳಾಂಗಣ ವಿಷಯಗಳಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಕಾನೂನು ಮತ್ತು ವೃತ್ತಿಪರ ಕೌಶಲ್ಯತೆಗಳ ಬಗ್ಗೆ ನೈಪುಣ್ಯತೆ ಹೊಂದಲು ಪೊಲೀಸ್ ಅಧಿಕಾರಿ ಹಾಗೂ ನುರಿತ ಮತ್ತು ಹೆಚ್ಚಿನ ಅನುಭವವುಳ್ಳ ಅತಿಥಿ ಉಪನ್ಯಾಸಕರಿಂದ ತರಬೇತಿ ನೀಡಲಾಗುತ್ತದೆ.

ಹೊರಾಂಗಣ ವಿಷಯಗಳಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಶಿಸ್ತು, ಸಮಯ ಪಾಲನೆ ಬಗ್ಗೆ ಮತ್ತು ದೈಹಿಕ ಮತ್ತು ಶಾರೀರಿಕವಾಗಿ ಸಧೃಡವಾಗಿರಲು ವ್ಯಾಯಾಮ, ಯೋಗ, ಕರಾಟೆ, ಈಜು ಹಾಗು ವೃತ್ತಿಪರತೆಯನ್ನು ಹೊಂದಲು ಕವಾಯತು ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ.

 

×
ABOUT DULT ORGANISATIONAL STRUCTURE PROJECTS